ಚಂಡೀಗಢ : ಶಾಲಾ ಆವರಣದಲ್ಲಿದ್ದ ಬೃಹತ್ ಮರ ಬಿದ್ದು ಓರ್ವ ವಿದ್ಯಾರ್ಥಿ ಸಾವು.. ಹಲವರಿಗೆ ಗಾಯ - ಶಾಲೆಯ ಆವರಣದಲ್ಲಿದ್ದ ಮರ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸಾವು
ಚಂಡೀಗಢ : ನಗರದ ಸೆಕ್ಟರ್ 9ರ ಶಾಲೆಯ ಆವರಣದಲ್ಲಿದ್ದ ಮರ ಬಿದ್ದ ಪರಿಣಾಮ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಒಬ್ಬ ವಿದ್ಯಾರ್ಥಿಗೆ ಸ್ಥಿತಿ ಚಿಂತಾಜನಕವಾಗಿದ್ದು, 19 ಮಕ್ಕಳಿಗೆ ಗಾಯಗಳಾಗಿದೆ. ಮಕ್ಕಳನ್ನು ತಕ್ಷಣವೇ ಸೆಕ್ಟರ್ 16ಕ್ಕೆ ದಾಖಲಿಸಲಾಗಿದೆ. ಘಟನೆ ಊಟದ ವಿರಾಮದ ವೇಳೆ ನಡೆದಿದ್ದು, ಮಕ್ಕಳು ಮರದ ಸುತ್ತ ಆಟವಾಡುತ್ತಿದ್ದರು ಎನ್ನಲಾಗಿದೆ.