ಬೆಂಗಳೂರಲ್ಲಿ ಮತ್ತೆ ಪುಂಡರ ಹುಚ್ಚಾಟ.. ನಿಲ್ಲದ ಯುವಕರ ಬೈಕ್ ವ್ಹೀಲಿಂಗ್ ಶೋಕಿ - ಯುವಕರಿಂದ ಬೈಕ್ ವ್ಹೀಲಿಂಗ್
ಬೆಂಗಳೂರು: ಸಂಚಾರ ಪೊಲೀಸರಿಂದ ಜಾಗೃತಿ ನಡುವೆಯೂ ರಾಜಧಾನಿಯಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ ಮಿತಿ ಮಿರುತ್ತಿದೆ. ನಗರದಲ್ಲಿ ಚಿಗುರುಮೀಸೆ ಹುಡುಗರ ವ್ಹೀಲಿಂಗ್ ಶೋಕಿ ಇನ್ನೂ ನಿಂತಿಲ್ಲ. ಇತ್ತೀಚೆಗೆ ನಗರದ ವಿವಿ ಪುರಂ ಬಳಿಯ ಕಿಮ್ಸ್ ಕಾಲೇಜು ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ ಮೂವರು ಸವಾರರಿದ್ದು, ಹಿಂಬದಿ ಮಧ್ಯದಲ್ಲಿರುವ ಸವಾರ ಹಿಮ್ಮುಖವಾಗಿ ಕುಳಿತಿದ್ದರೆ, ಮತ್ತೊಂದರಲ್ಲಿ ಓರ್ವ ಬೈಕ್ ಸವಾರನಿದ್ದಾನೆ. ಅಪಾಯಕಾರಿ ವ್ಹೀಲಿಂಗ್ ವೇಳೆ ಕೊಂಚ ಯಾಮಾರಿದರೂ ಜೀವಕ್ಕೆ ಕುತ್ತು ಗ್ಯಾರಂಟಿ, ಅಲ್ಲದೆ ಬೇರೆ ವಾಹನ ಸವಾರರಿಗೂ ಕಂಟಕವಾಗುವ ಸಾಧ್ಯತೆ ಇರುತ್ತದೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಇವರನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated : May 5, 2022, 4:24 PM IST