ಕೈಯಲ್ಲಿ ಪಿಸ್ತೂಲ್ ಹಿಡಿದು ಸಂಭ್ರಮ.. ಸಿಧು ಮೂಸೆವಾಲಾ ಹಂತಕರ ವಿಡಿಯೋ ವೈರಲ್! - ಸಿಧು ಮೂಸೆವಾಲಾ ಹಂತಕರ ವಿಡಿಯೋ ವೈರಲ್
ನವದೆಹಲಿ: ಸಿಧು ಮೂಸೆವಾಲಾ ಹಂತಕರು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಸಂಭ್ರಮಿಸಿರುವ ವಿಡಿಯೋ ತುಣುಕವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೇ. 29ರಂದು ನಡೆದ ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆ ಮಾಡಲಾಗಿದ್ದು, ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಎಲ್ಲ ಆರೋಪಿಗಳ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದರ ಬೆನ್ನಲ್ಲೇ ಶಸ್ತ್ರಾಸ್ತ್ರಗಳೊಂದಿಗೆ ಸಂಭ್ರಮಿಸುತ್ತಿರುವ ವಿಡಿಯೋ ತುಣುಕವೊಂದು ಇದೀಗ ರಿಲೀಸ್ ಆಗಿದೆ. ಕಾರಿನಲ್ಲಿ ಕುಳಿತುಕೊಂಡಿರುವ ಐವರು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು ಸಂಭ್ರಮಿಸಿದ್ದಾರೆ.