ಕೊಪ್ಪಳದಲ್ಲಿ ಮಳೆ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ : ಹಳ್ಳ ಉಕ್ಕಿ ಹರಿದು ಸಂಚಾರ ಬಂದ್ - ಈಟಿವಿ ಭಾರತ್ ಕನ್ನಡ
ಕೊಪ್ಪಳ: ಜಿಲ್ಲೆಯಾದ್ಯಂತ ನಿನ್ನೆಯಿಂದ ಬಿಟ್ಟೂಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನ ಜೀವನಕ್ಕೆ ಅಡಚಣೆಯಾಗಿದೆ. ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮ ಸೇರಿದಂತೆ ಅನೇಕ ಕಡೆಗಳಲ್ಲಿ ಸುರಿದ ಮಳೆಯಿಂದಾಗಿ ಕೆಲವೆಡೆ ಮನೆಯ ಮೆಲ್ಚಾವಣಿ ಕುಸಿದಿದೆ. ಚಿಕ್ಕೇನಕೊಪ್ಪ ಗ್ರಾಮದ ಪಕ್ಕದಲ್ಲಿರುವ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ರಸ್ತೆ ದಾಟಲಾಗದೇ ವಿದ್ಯಾರ್ಥಿಗಳು, ಬೈಕ್ ಸವಾರರು ಮತ್ತು ಇನ್ನಿತರರು ತಡರಾತ್ರಿಯವರೆಗೂ ಕಾಯ್ದು ಹಳ್ಳದಾಟಿ ಊರು ಸೇರಿದರು. ಈ ಹಳ್ಳಕ್ಕೆ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.