ಪಾನಿಪುರಿ ತಳ್ಳುಗಾಡಿಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ: ಚಾಲಕ ಪರಾರಿ - ಆಟೋ ರಿಕ್ಷಾವನ್ನು ಹಿಂದೆ ಹಾಕುವ ಬರದಲ್ಲಿ ಪಾನಿಪುರಿ ಗಾಡಿಗೆ ಸ್ಕಾರ್ಪಿಯೋ ಡಿಕ್ಕಿ
ಧನ್‌ಬಾದ್ (ಜಾರ್ಖಂಡ್): ಆಟೋ ರಿಕ್ಷಾವನ್ನು ಹಿಂದೆ ಹಾಕುವ ಭರದಲ್ಲಿ ಪಾನಿಪುರಿ ಗಾಡಿಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆದ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಪೂರ್ವ ಬಸುರಿಯಾ ಪೊಲೀಸ್ ಔಟ್‌ಪೋಸ್ಟ್ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಿಂದ ಆಸ್ಪತ್ರೆಗೆ ಸೇರಿದ್ದ ಮೂವರಲ್ಲಿ ಇಬ್ಬರು ಮೃತಪಟ್ಟಿರುವುದು ವರದಿಯಾಗಿದ್ದು, ಒಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಸ್ಕಾರ್ಪಿಯೋ ಪಾನಿಪುರಿ ತಳ್ಳು ಗಾಡಿಗೆ ಡಿಕ್ಕಿ ಹೊಡೆದ ನಂತರ, ಮತ್ತೆ ರಸ್ತೆಯ ಎಡಭಾಗಕ್ಕೆ ತಿರುಗಿತು ಮತ್ತು ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.