ನೋಡಿ.. ಪುನೀತ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮದುವೆಯಾದ ನವಜೋಡಿ - floral tributes
ಚಿಕ್ಕಮಗಳೂರು: ಪುನೀತ್ ಅಭಿಮಾನಿಯೊಬ್ಬ ಅಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮದುವೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರಿನ ನಿಲಯ್ ಮತ್ತು ಸುಪ್ರಿಯಾ ಜೋಡಿ ಮದುವೆಗೂ ಮುನ್ನ ಪುನೀತ್ ಅವರಿಗೆ ನಮಿಸಿ ವಿವಾಹವಾಗಿದ್ದಾರೆ. ಮದುವೆ ಹಾಲ್ನ ತುಂಬಾ ಪುನೀತ್ ಫೋಟೋಗಳನ್ನೇ ಹಾಕಿದ್ದು, ಎಲ್ಇಡಿ ಪರದೆ ಮೇಲೂ ಪುನೀತ್ ಭಾವಚಿತ್ರ ಆರಾಧನೆ ಮಾಡಿದ್ದಾರೆ.