ವಿಡಿಯೋ.. ಪಂಜಾಬ್ನಲ್ಲಿ ಬ್ಯಾಂಕ್ ದರೋಡೆಗೆ ಯತ್ನಿಸಿದ ಕಿಡಿಗೇಡಿಗಳು
ಮೊಗಾ(ಪಂಜಾಬ್): ಇಲ್ಲಿ ಕಿಡಿಗೇಡಿಗಳ ಕಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಮೊಗಾ - ಫಿರೋಜ್ಪುರ ಜಿಟಿ ರಸ್ತೆಯಲ್ಲಿರುವ ದಾರಾಪುರ ಗ್ರಾಮದಲ್ಲಿನ ಇಂಡಸ್ಇಂಡ್ ಬ್ಯಾಂಕ್ ದರೋಡೆಗೆ ಪ್ರಯತ್ನಿಸಿ ವಿಫಲರಾಗಿದ್ದಾರೆ. ಮಾಹಿತಿ ಪ್ರಕಾರ ದುಷ್ಕರ್ಮಿಗಳ ದಾಳಿಯಿಂದ ಬ್ಯಾಂಕ್ ಸಿಬ್ಬಂದಿಗೆ ಗಾಯಗಳಾಗಿವೆ. ಈ ಘಟನೆ ಸಂಬಂಧ ವಿಡಿಯೋ ದೊರೆತಿದೆ, ಅದರಲ್ಲಿ ಮೂವರು ಸೆಕ್ಯೂರಿಟಿಗೆ ಹಲ್ಲೆ ಮಾಡಿ ಬೈಕ್ನಲ್ಲಿ ತಪ್ಪಿಸಿಕೊಂಡು ಹೋಗುವ ದೃಶ್ಯ ಕಾಣ ಸಿಗುತ್ತದೆ. ಅಲ್ಲದೇ ದುಷ್ಕರ್ಮಿಗಳು ತಮ್ಮ ಬಳಿ ಖಡ್ಗವನ್ನು ಹಿಡಿದಿರುವುದನ್ನೂ ಕಾಣ ಬಹುದಾಗಿದೆ.