ಅಗ್ನಿವೀರ್ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುವಕನಿಗೆ ಹೈಸ್ಪೀಡ್ ರೈಲು ಡಿಕ್ಕಿ: ವಿಡಿಯೋ - youth died
ಧುಲೆ (ಮಹಾರಾಷ್ಟ್ರ): ಯುವಕನೋರ್ವನಿಗೆ ಹೈಸ್ಪೀಡ್ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ಯುವಕನನ್ನು ಧುಲೆ ತಾಲೂಕಿನ ವಡ್ಜೈ ಗ್ರಾಮದ ರೈತ ಕುಟುಂಬದ 20 ವರ್ಷದ ರಾಮೇಶ್ವರ ದೇವರೆ ಎಂದು ಗುರುತಿಸಲಾಗಿದೆ. 'ಅಗ್ನಿವೀರ್' ನೇಮಕಾತಿಗಾಗಿ ಯುವಕ ಮಂಗಳವಾರ ರಾತ್ರಿ ಧುಲಾದಿಂದ ಚಾಲಿಸ್‌ಗಾಂವ್‌ಗೆ ತಲುಪಿದ್ದ. ಬುಧವಾರ ಬೆಳಗ್ಗೆ ಮುಂಬೈಗೆ ತೆರಳಲು ಕಲ್ಯಾಣ್‌ಗೆ ಬಂದಿಳಿದರು. ಈ ವೇಳೆ ರಾಮೇಶ್ವರ ಅವರಿಗೆ ವಾಕರಿಕೆ ಬರಲಾರಂಭಿಸಿದೆ. ರೈಲ್ವೆ ಪ್ಲಾಟ್ಫಾರ್ಮ್ನಲ್ಲಿ ವಾಂತಿ ಮಾಡಿದ್ರೆ ಕೊಳಕು ಆಗುತ್ತದೆ ಎಂದು ರೈಲ್ವೆ ಹಳಿ ಬಳಿ ಹೋಗಿದ್ದಾರೆ. ಈ ವೇಳೆ ದುರಂತ ಸಂಭವಿಸಿದೆ. ಮುಂಬ್ರಾ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ.
Last Updated : Sep 22, 2022, 4:20 PM IST