ನೋಡಿ: ಬಾಗಿಲು ತೆರೆದು ದರ್ಶನ ನೀಡಿದ ಬದ್ರಿನಾಥ; ಭಕ್ತರ ಸಂಭ್ರಮ - ಉತ್ತರಾಖಂಡ
ಉತ್ತರಾಖಂಡ: ಕ್ವಿಂಟಲ್‌ಗಟ್ಟಲೆ ಹೂವುಗಳಿಂದ ಆಕರ್ಷಕ ಶೃಂಗಾರ, ವೇದಮಂತ್ರ ಘೋಷದೊಂದಿಗೆ ಧಾರ್ಮಿಕ ವಿಧಿವಿಧಾನ, ಸೇನಾ ಬ್ಯಾಂಡ್ ಸಂಗೀತ, ಅಪಾರ ಸಂಖ್ಯೆಯ ಭಕ್ತರು.. ಇದು ದೇವಭೂಮಿ ಉತ್ತರಾಖಂಡ್ ರಾಜ್ಯದಲ್ಲಿರುವ ಪುರಾಣಪ್ರಸಿದ್ಧ ಹಿಂದೂಗಳ ಪವಿತ್ರ ಕ್ಷೇತ್ರ ಬದ್ರಿನಾಥನ ಸನ್ನಿಧಿ. ಇಂದು ಬೆಳಗ್ಗೆ ದೇಗುಲದ ಬಾಗಿಲು ತೆರೆಯುತ್ತಿದ್ದಂತೆ ಭಕ್ತರ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಕೆಲವರಂತೂ ದೇಗುಲದ ಆವರಣದಲ್ಲಿ ಕುಣಿದು ಖುಷಿಪಟ್ಟರು.