ನೋಡಿ: ಗಾಂಧೀಜಿ ಬಳಸುತ್ತಿದ್ದ ಚರಕ ತಿರುಗಿಸಿದ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ - ಸಬರಮತಿ ಆಶ್ರಮಕ್ಕೆ ಬೋರಿಸ್ ಜಾನ್ಸನ್ ಭೇಟಿ
ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಇಂದು ಗುಜರಾತ್ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿನ ಸಾಂಪ್ರದಾಯಿಕ ಚರಕವನ್ನು ತಿರುಗಿಸಲು ಪ್ರಯತ್ನಿಸಿದರು. ಚರಕದ ಮುಂದೆ ಕುಳಿತ ಬೋರಿಸ್ ಚಕ್ರವನ್ನು ಹೇಗೆ ತಿರುಗಿಸಬೇಕು ಎಂದು ಗೊತ್ತಾಗದೇ ಇದ್ದಾಗ, ಅಲ್ಲಿಯೇ ಇದ್ದ ಮಹಿಳೆಯರಿಬ್ಬರು ಇಂಗ್ಲೆಂಡ್ ಪ್ರಧಾನಿಗೆ ಸಹಾಯ ಮಾಡಿದರು.