ನಡು ರಸ್ತೆಯಲ್ಲೇ ಟಪಾಂಗುಚ್ಚಿ.. ಉಡುಪಿ ಯುವತಿಯ ಈ ಡ್ಯಾನ್ಸ್ಗೆ ಫಿದಾ ಆದ ನೆಟ್ಟಿಗರು.. - ಈಟಿವಿ ಭಾರತ್ ಕರ್ನಾಟಕ
ಉಡುಪಿ : ಕೃಷ್ಣಾಷ್ಟಮಿ ಅಂದ್ರೆ ಸಾಕು, ಉಡುಪಿಯಲ್ಲಿ ವೇಷಗಳದ್ದೇ ಅಬ್ಬರ. ಬೀದಿ ಬೀದಿಗಳಲ್ಲಿ ಬಣ್ಣದ ವೇಷಗಳದ್ದೇ ಕಾರುಬಾರು. ವೇಷ ಹಾಕಿದವರದ್ದು ಸಂಭ್ರಮವಾದರೆ, ವೇಷಧಾರಿಗಳನ್ನು ನೋಡುವವರ ಸಂಭ್ರಮವೂ ಕಂಡುಬರುತ್ತೆ. ಉಡುಪಿಯ ಬೀದಿಯೊಂದರಲ್ಲಿ ವೇಷಧಾರಿಯೊಂದಿಗೆ ಯುವತಿಯೊಬ್ಬರು ಹೆಜ್ಜೆ ಹಾಕಿದ ದೃಶ್ಯ ಸದ್ಯ ಸಖತ್ ವೈರಲ್ ಆಗುತ್ತಿದೆ. ಭಗವತಿ ನಾಸಿಕ್ ಬ್ಯಾಂಡ್ ಕಲಾವಿದರ ಜೊತೆ ಈ ಯುವತಿ ಸೂಪರ್ ಡ್ಯಾನ್ಸ್ ಮಾಡಿದ್ದಾರೆ. ಇವರ ಡ್ಯಾನ್ಸಿಂಗ್ ಸ್ಟೈಲ್ಗೆ ಸ್ಪರ್ಧೆ ಕೊಡುವಂತೆ ವೇಷಧಾರಿಯೂ ಹೆಜ್ಜೆ ಹಾಕಿದ್ದಾರೆ.