ವಿಡಿಯೋ: ಒಡಿಶಾದ ನಾಗವಳಿ ನದಿ ನಡುವೆ ಸಿಲುಕಿದ ಪ್ರವಾಸಿಗರ ರಕ್ಷಣೆ - ಒಡಿಶಾ ಮಳೆ
ಒಡಿಶಾ: ರಾಯಗಡ ಜಿಲ್ಲೆಯ ನಾಗವಳಿ ನದಿ ಮಧ್ಯದ ಬಂಡೆಯ ಮೇಲೆ ಸಿಲುಕಿದ್ದ ಇಬ್ಬರು ಪ್ರವಾಸಿಗರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಜಿಲ್ಲೆಯ ಕಾಶಿಪುರ ಬ್ಲಾಕ್‌ನ ಪೊಡಪಾಡಿ ಪ್ರದೇಶದ ಸುನಾಮಿ ನಾಯಕ್ ಮತ್ತು ಸುಧೀರ್ ನಾಯಕ್ ಎಂಬಿಬ್ಬರು ನದಿಗೆ ತೆರಳಿದ್ದಾಗ ನೀರಿನ ಮಟ್ಟ ಕಡಿಮೆಯಿತ್ತು. ಆದ್ರೆ ಬಳಿಕ ಸುರಿದ ಭಾರಿ ಮಳೆಯಿಂದಾಗಿ ದಿಢೀರ್ ನೀರಿನ ಮಟ್ಟ ಹೆಚ್ಚಾಗಿದ್ದು, ದಡ ಸೇರಲಾಗದೆ ಬಂಡೆಯ ಮೇಲೆ ನಿಂತಿದ್ದರು. ಈ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರನ್ನು ರಕ್ಷಿಸಿದರು.