ತುಮಕೂರು ಹಿಂದೂ ಮಹಾಗಣಪತಿ ಅದ್ಧೂರಿ ಮೆರವಣಿಗೆ: ಗಮನ ಸೆಳೆದ ಸಾವರ್ಕರ್, ಪ್ರವೀಣ್ ನೆಟ್ಟಾರು ಭಾವಚಿತ್ರ - ಮಹಾಗಣಪತಿ ನಿಮಜ್ಜನ
ತುಮಕೂರು: ನಗರದ ಹಿಂದೂ ಮಹಾಗಣಪತಿ ನಿಮಜ್ಜನ ಮೆರವಣಿಗೆ ಸಾವಿರಾರು ಜನರ ನಡುವೆ ಶನಿವಾರ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಡಿಜೆ ಹಾಡುಗಳಿಗೆ ಭಕ್ತರು ಮೈಮರೆತು ಹೆಜ್ಜೆ ಹಾಕಿದರು. ವೀರ್ ಸಾವರ್ಕರ್ ಭಾವಚಿತ್ರವುಳ್ಳ ಕೇಸರಿ ಧ್ವಜಗಳು ಹಾಗೂ ಇತ್ತೀಚಿಗೆ ಕೊಲೆಯಾದ ಸುಳ್ಯದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಫೋಟೋಗಳನ್ನು ಹಿಂದೂಪರ ಸಂಘಟನೆ ಕಾರ್ಯಕರ್ತರು ಪ್ರದರ್ಶಿಸಿದರು. ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಕಂಡುಬಂದರು.