ಚಿನ್ನದ ಪದಕ ವಿಜೇತೆ ಶ್ರೀಜಾ ಅಕುಲಾ ಅವರಿಂದ ಬುಡಕಟ್ಟು ನೃತ್ಯ ಪ್ರದರ್ಶನ - ತೆಲಂಗಾಣದ ಶ್ರೀಜಾ ಅಕುಲಾ
ಗುಜರಾತ್ನ ಸೂರತ್‌ನಲ್ಲಿ 36ನೇ ರಾಷ್ಟ್ರೀಯ ಕ್ರೀಡಾಕೂಟ ಅದ್ಧೂರಿಯಾಗಿ ಆಯೋಜಿಸಲಾಗಿದೆ. ಸೂರತ್‌ನಲ್ಲಿ ಟೇಬಲ್ ಟೆನ್ನಿಸ್ ಆಟ ನಡೆಯುತ್ತಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಕ್ಷೇತ್ರದಲ್ಲಿ ಖ್ಯಾತರಾಗಿರುವ ತೆಲಂಗಾಣದ ಶ್ರೀಜಾ ಅಕುಲಾ ಪ್ರಥಮ ಬಾರಿಗೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಆಡಲಿದ್ದಾರೆ. ಶ್ರೀಜಾ ಗುಜರಾತಿಗೆ ಬಂದು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿದ್ದಾರೆ. ಅಲ್ಲದೆ, ಗುಜರಾತ್ನ ಪಾಕ ಪದ್ಧತಿಯನ್ನು ಸವಿದಿದ್ದಾರೆ.