ಮುದ್ದೇಬಿಹಾಳದಲ್ಲಿ ಭಾರಿ ಮಳೆಗೆ ಬೈಕ್ ಮೇಲೆ ಬಿದ್ದ ಮರ, ಬಾಲಕಿ ಪಾರು
ಮುದ್ದೇಬಿಹಾಳ: ಪಟ್ಟಣದ ಗಣೇಶ ನಗರದಲ್ಲಿ ಭಾರಿ ಗಾಳಿ, ಮಳೆಗೆ ಬೇವಿನ ಮರವೊಂದು ಬೈಕ್ ಮೇಲೆ ಉರುಳಿ ಬಿದ್ದು, ವಾಹನ ಜಖಂಗೊಂಡಿದೆ. ಬೈಕ್ ಸಮೀಪದಲ್ಲೇ ಇದ್ದ ಬಾಲಕಿ ಕೂದಲೆಳೆ ಅಂತರದಲ್ಲಿ ಪಾರಾದಳು. ಇಂಗಳಗೇರಿ ಗ್ರಾಮದ ಚಂದ್ರಶೇಖರ ಬಿರಾದಾರ ಎಂಬುವವರ ಬೈಕ್ ಇದಾಗಿದೆ ಎಂದು ತಿಳಿದು ಬಂದಿದೆ. ತಾಲೂಕಿನ ಹಲವೆಡೆ ವರುಣ ಆರ್ಭಟಿಸಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದ್ದಾನೆ. ಮುಂದಿನ ಎರಡು ದಿನ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.