ಕೊಡಗಿನಲ್ಲಿ ಕಸದ ರಾಶಿ: ಕಸ ವಿಂಗಡಿಸುವ ಯಂತ್ರಗಳಿಗೆ ಹಿಡಿಯುತ್ತಿದೆ ತುಕ್ಕು! - ಮಡಿಕೇರಿಯಲ್ಲಿ ಕಸದ ಸಮಸ್ಯೆ
ಪ್ರಾಕೃತಿಕ ಸೌಂದರ್ಯವನ್ನೇ ಹೊದ್ದು ಮಲಗಿರುವ ಮಂಜಿನ ನಗರಿಗೆ ಬೆಟ್ಟಗುಡ್ಡಗಳೇ ಭೂಷಣ. ಪ್ರವಾಸಿಗರ ಸ್ವರ್ಗ, ಕರ್ನಾಟಕದ ಕಾಶ್ಮೀರ ಹೀಗೆ ನಾನಾ ಹೆಸರುಗಳಿಂದ ಕರೆಸಿಕೊಳ್ಳುವ ಮಡಿಕೇರಿಯಲ್ಲಿ ಕಸದ ಸಮಸ್ಯೆ ಉಲ್ಭಣಗೊಂಡಿದೆ. ಇಲ್ಲಿನ ಪಾಲಿಕೆ ಸರಿಯಾಗಿ ಕಸ ನಿರ್ವಹಣೆ ಮಾಡದ ಕಾರಣ ಎಲ್ಲೆಂದರಲ್ಲಿ ಕಸದ ರಾಶಿ ರಾಶಿಗಳೇ ಕಣ್ಣಿಗೆ ರಾಚುತ್ತಿವೆ.