ಅಪಾಯ ಲೆಕ್ಕಿಸದೇ, ಮುನ್ನೆಚ್ಚರಿಕೆ ಕ್ರಮಗಳಿಲ್ಲದೆ ಟ್ರಾಕ್ಟರ್ಗಳ ಹಗ್ಗ ಜಗ್ಗಾಟ- Video - tractor race
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಬೀರಲಿಂಗೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಪಾಯಕಾರಿ ಟ್ರ್ಯಾಕ್ಟರ್ ಹಗ್ಗ ಜಗ್ಗಾಟ ಆಯೋಜಿಸು ಮಾಡಿರುವ ಘಟನೆ ನಡೆದಿದೆ. ಅಥಣಿ ಚಮಕೇರಿ ರೋಡ್ ಮೇಲೆ ಆಯೋಜಕರು ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸದೆ ಟ್ರ್ಯಾಕ್ಟರ್ಗಳ ರೇಸ್ ಆಯೋಜನೆ ಮಾಡಿದ್ದರು. ಸ್ಥಳೀಯ ಪೊಲೀಸ್ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.