ಮೈಸೂರು ದಸರಾ ಪಂಜಿನ ಕವಾಯತು ರಿಹರ್ಸಲ್ಗೆ ಮನಸೋತ ಪ್ರವಾಸಿಗರು - ಬನ್ನಿಮಂಟಪದ ಮೈದಾನ
ಮೈಸೂರು: ಬನ್ನಿಮಂಟಪದ ಮೈದಾನದಲ್ಲಿ ಮಂಗಳವಾರ ರಾತ್ರಿ ನಡೆದ ಪಂಜಿನ ಕವಾಯತು ರಿಹರ್ಸಲ್, ಪೊಲೀಸ್ ಇಲಾಖೆಯ ವಿವಿಧ ತುಕಡಿಯ ಆಕರ್ಷಕ ಪಥ ಸಂಚಲನ, ವಿವಿಧ ಜಾನಪದ ತಂಡಗಳ ನೃತ್ಯದ ಸೊಬಗು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರವಾಸಿಗರನ್ನು ಆಕರ್ಷಿಸಿತು. ಜೊತೆಗೆ ಎರಡು ವರ್ಷದ ನಂತರ ದಸರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿರುವುದರಿಂದ ಮೈಸೂರಿನತ್ತ ಪ್ರವಾಸಿಗರ ಚಿತ್ತ ನೆಟ್ಟಿದೆ.