ಕರ್ನಾಟಕ

karnataka

ETV Bharat / videos

ಮೈಸೂರು ದಸರಾ.. ಮೈನವಿರೇಳಿಸಿದ ಡ್ರೋನ್ ಲೈಟ್ ಶೋ, ಟೆಂಟ್ ಪೆಗ್ಗಿಂಗ್​ - ಪಂಜಿನ ಕವಾಯತು

By

Published : Oct 6, 2022, 9:06 AM IST

ಮೈಸೂರು: ಬನ್ನಿಮಂಟಪದ ಮೈದಾನದಲ್ಲಿ ನಡೆದ ಪಂಜಿನ ಕವಾಯತು ವರ್ಣರಂಜಿತವಾಗಿತ್ತು. ಪ್ರತಿ ವರ್ಷದಂತೆ ಅಶ್ವಾರೋಹಿ ಪಡೆಯಿಂದ ನಡೆದ ಪೊಲೀಸರ ಟೆಂಟ್ ಪೆಗ್ಗಿಂಗ್ ನೆರೆದಿದ್ದವರ ಎದೆ ಝಲ್ ಎನಿಸುವಂತೆ ಮಾಡಿತು. ಇದೇ ಮೊದಲ ಬಾರಿಗೆ ಪ್ರದರ್ಶನಗೊಂಡ ಡ್ರೋನ್ ಲೈಟ್ ಶೋ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಬೆಂಗಳೂರಿನ ಥಣಿಸಂದ್ರ ಪೊಲೀಸ್ ತರಬೇತಿ ಕೇಂದ್ರದ 300 ಪೊಲೀಸರು 600 ಪಂಜುಗಳನ್ನು ಹಿಡಿದು ಮನಮೋಹಕ ದೃಶ್ಯಗಳು, ಅಕ್ಷರಾಕೃತಿಗಳನ್ನು ರಚಿಸಿದರು.

ABOUT THE AUTHOR

...view details