ಲೋಕಸಭೆಯಲ್ಲಿ ಬದನೆಕಾಯಿ ಕಚ್ಚಿ ತಿಂದು ಬೆಲೆ ಏರಿಕೆಗೆ ಟಿಎಂಸಿ ಸಂಸದೆ ಆಕ್ರೋಶ - Etv bharat kannada
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು ಲೋಕಸಭೆ ಕಲಾಪದಲ್ಲಿ ಟಿಎಂಸಿ ಸಂಸದೆಯೋರ್ವರು ಬದನೆಕಾಯಿ ಕಚ್ಚಿ ತಿಂದಿರುವ ಪ್ರಸಂಗ ನಡೆಯಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾಗ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಈ ರೀತಿಯಾಗಿ ನಡೆದುಕೊಂಡರು. "ದೇಶದಲ್ಲಿ ಅಡುಗೆ ಅನಿಲ ಬೆಲೆ ಹೆಚ್ಚಾಗಿದ್ದು ಬಡವರು ಅಡುಗೆ ಮಾಡುವುದು ಹೇಗೆ?. ಹಸಿ ತರಕಾರಿಗಳನ್ನು ತಿಂದು ಜೀವನ ನಡೆಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ" ಎಂದರು. ಕಳೆದ ಕೆಲ ತಿಂಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ನಾಲ್ಕು ಸಲ ಏರಿಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.