ಮಾಸ್ಕ್ ಧರಿಸಲು ಹೇಳಿದ್ದಕ್ಕೆ ತಿಪಟೂರು ನಗರಸಭೆ ಸಿಬ್ಬಂದಿ ಮೇಲೆ ಹಲ್ಲೆ - Tumkur Latest News
ತುಮಕೂರು: ಮಾಸ್ಕ್ ಧರಿಸುವಂತೆ ತಾಕೀತು ಮಾಡಿದ ತಿಪಟೂರು ನಗರಸಭೆ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಗರಸಭೆ ಸಿಬ್ಬಂದಿ ವೆಂಕಟೇಶ್ ಹಲ್ಲೆಗೊಳಗಾದ ವ್ಯಕ್ತಿ. ತಿಪಟೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ವ್ಯಕ್ತಿಯೊಬ್ಬರು ಮುಖಗವಸು ಧರಿಸದೆ ಬಂದಿದ್ದನ್ನು ಕಂಡ ವೆಂಕಟೇಶ್ ಪ್ರಶ್ನಿಸಿದ್ದಾರೆ. ನಂತರ ದಂಡ ವಿಧಿಸುವಂತೆಯೂ ವೆಂಕಟೇಶ್ ಸೂಚಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ನಡೆದು ವ್ಯಕ್ತಿಯು ಏಕಾಏಕಿ ವೆಂಕಟೇಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.