ದೇವರಿಗಾಗಿ ಬಡಿದಾಡಿಕೊಳ್ಳುವ ಭಕ್ತರು.. ರಕ್ತ ಚೆಲ್ಲಿದರೂ ನಿಲ್ಲದ ಆಚರಣೆ
ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳು ಆಚರಣೆಯಲ್ಲಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಇನ್ನೂ ಕೆಲವು ಆಚರಣೆಗಳು ನಮಗೆ ಅಚ್ಚರಿಯನ್ನುಂಟು ಮಾಡುತ್ತವೆ. ಅಂತಹದ್ದೇ ಒಂದು ಆಚರಣೆ ಕರ್ನಾಟಕದ ಗಡಿಯಲ್ಲಿರುವ ಆಂಧ್ರಪ್ರದೇಶದ ದೇವರಗಟ್ಟು ಗ್ರಾಮದಲ್ಲಿ ನಡೆಯುತ್ತದೆ. ಈ ಗ್ರಾಮದಲ್ಲಿ ನಡೆಯುವ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಭಕ್ತರು ದೇವರಿಗಾಗಿ ಬಡಿದಾಡಿಕೊಳ್ಳುತ್ತಾರೆ.