ಸಂಸತ್ತಿನಲ್ಲಿ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಆರಂಭ - ಸಂಸತ್ತಿನಲ್ಲಿ ಮತ ಎಣಿಕೆ ಆರಂಭ
15ನೇ ರಾಷ್ಟ್ರಪತಿ ಆಯ್ಕೆಗೆ ನಡೆದ ಚುನಾವಣೆಯ ಮತ ಎಣಿಕೆ ಸಂಸತ್ತಿನಲ್ಲಿ ಶುರುವಾಗಿದೆ. ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ಚುನಾವಣಾ ಕಣದಲ್ಲಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಹೆಚ್ಚಿನ ಪಕ್ಷಗಳು ಬೆಂಬಲಿಸಿದ ಕಾರಣ ಅವರ ಗೆಲುವು ಖಚಿತ ಎಂದು ಹೇಳಲಾಗ್ತಿದೆ. ಮತ ಎಣಿಕೆಯ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ.