ಲಾರಿ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಕರು; ಪಕ್ಕದಲ್ಲೇ ನಿಂತು ಕಣ್ಣೀರು ಹಾಕಿದ ಹಸು!
ವಿಜಯವಾಡ(ಆಂಧ್ರಪ್ರದೇಶ): ಮನುಷ್ಯರಂತೆ ಪ್ರಾಣಿಗಳಿಗೂ ಭಾವನೆಗಳಿವೆ ಎಂಬುದು ಅನೇಕ ನಿದರ್ಶನಗಳಿಗೆ ಸಾಬೀತಾಗಿದೆ. ಇದೀಗ ಅದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಹಸುವೊಂದು ತನ್ನ ಕರುವಿನ ಕಳೆಬರದ ಪಕ್ಕದಲ್ಲಿ ನಿಂತು ಗಂಟೆಗಟ್ಟಲೆ ಕಣ್ಣೀರು ಹಾಕಿದೆ. ಲಾರಿ ಡಿಕ್ಕಿ ಹೊಡೆದು ಕರುವೊಂದು ಸಾವನ್ನಪ್ಪಿದ್ದು, ಅದರ ಪಕ್ಕದಲ್ಲೇ ನಿಂತು ಹಸು ಕಣ್ಣೀರು ಸುರಿಸಿದೆ. ಕೆಲ ಗಂಟೆಗಳ ನಂತರ ಪೌರಕಾರ್ಮಿಕರು ಕರುವಿನ ಶವ ತೆಗೆದುಕೊಂಡು ಹೋಗಿದ್ದು, ಈ ವೇಳೆ ಸಹ ಹಸು ಅದನ್ನು ನೋಡುತ್ತ ಕಣ್ಣೀರು ಸುರಿಸಿದೆ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.