ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ: ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆ - ಬೆಂಗಳೂರು ಕಾರು ಅಪಘಾತ
ಬೆಂಗಳೂರು: ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಚಾಲಕನೋರ್ವ ಕಾರು ಹತ್ತಿಸಿದ ಅಮಾನವೀಯ ಘಟನೆ ಕಳೆದ ಎರಡು ದಿನಗಳ ಹಿಂದೆ ಇಂದಿರಾನಗರದ 2ನೇ ಮುಖ್ಯರಸ್ತೆಯಲ್ಲಿ ನಡೆದಿದೆ. ರಸ್ತೆ ಮೇಲೆ ತನ್ನ ಪಾಡಿಗೆ ಮಲಗಿದ್ದ ನಾಯಿ ಮೇಲೆ ಬೇಕಂತಲೇ ಕಾರು ಹತ್ತಿಸಿದ ಕಿಡಿಗೇಡಿ ವಿಕೃತಿ ಮೆರೆದಿದ್ದಾನೆ. ಕಳೆದ ಹಲವು ವರ್ಷಗಳಿಂದ ಸ್ನೇಹ ನಂದಿಹಾಳ್ ಎಂಬುವರು ಬ್ರೋನಿ ಎಂಬ ಹೆಸರಿನ ನಾಯಿಯನ್ನು ಸಾಕಿಕೊಂಡಿದ್ದರು. ಚಾಲಕನ ವಿರುದ್ಧ ಮಾಲೀಕರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಯಿ ಮೇಲೆ ಕಾರು ಹತ್ತಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.