ವಿಜಯಪುರದಲ್ಲೂ ಮಳೆಯೋ ಮಳೆ.. ಸಂಗಮನಾಥ ದೇವಸ್ಥಾನ ಜಲಾವೃತ - ಈಟಿವಿ ಭಾರತ್ ಕನ್ನಡ ಸುದ್ದಿ
ವಿಜಯಪುರ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಘೋಣಸಗಿ ರಸ್ತೆ ಮೇಲೆಯೇ ಹರಿದು ಹೋಗುತ್ತಿದೆ. ಪರಿಣಾಮ ಇಲ್ಲಿನ ದೇವಸ್ಥಾನ ಜಲಾವೃತವಾಗಿ ಆವರಣದಲ್ಲಿ ನೀರು ಆವರಿಸಿದೆ. ಹಳ್ಳದ ನೀರು ಗರ್ಭಗುಡಿಯಲ್ಲೂ ಹೊಕ್ಕಿದೆ. ನೀರಿನಿಂದ ಸಂಗಮನಾಥ ದೇವರ ಗದ್ದುಗೆ ಜಲಾವೃತವಾಗಿದೆ. ಇದೀಗ ಅದೇ ನೀರಲ್ಲೇ ಪೂಜೆ- ಪುನಸ್ಕಾರ ನಡೆಯುತ್ತಿದೆ. ಹಳ್ಳದಲ್ಲಿ ನೀರು ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಪೂಜೆ ಮಾಡುವುದನ್ನು ಅರ್ಚಕರು ನಿಲ್ಲಿಸಬೇಕಾಗಲಿದೆ.