ಹಿಮಾಚಲದಲ್ಲಿ ಮಳೆ - ಹಿಮಪಾತ: ಶಿಮ್ಲಾದಲ್ಲಿ 15 ಸೆಲ್ಸಿಯಸ್ಗಿಳಿದ ತಾಪಮಾನ - ಶಿಮ್ಲಾದಲ್ಲಿ ತಾಪಮಾನ ಇಳಿಕೆ
ಹಿಮಾಚಲ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ಮಳೆ ಮತ್ತು ಹಿಮಪಾತವಾಗುತ್ತಿದೆ. ಇದರಿಂದ ತಾಪಮಾನದಲ್ಲಿ ತೀವ್ರ ಇಳಿಕೆಯಾಗಿದೆ. ಪರಿಣಾಮ ವಾತಾವರಣ ಆಹ್ಲಾದಕರವಾಗಿ ಪರಿಣಮಿಸಿದೆ. ಪ್ರವಾಸಿಗರು ಶಿಮ್ಲಾದಿಂದ ಧರ್ಮಶಾಲಾ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಲ್ಲೂ ದೆಹಲಿ, ಹರಿಯಾಣ, ರಾಜಸ್ಥಾನದಂತಹ ಬಿಸಿಲ ಪ್ರದೇಶದಿಂದ ತಾತ್ಕಾಲಿಕ ವಿಮುಕ್ತಿ ಪಡೆಯಲು ಪ್ರವಾಸಿಗರು ಈ ಸ್ಥಳಕ್ಕೆ ಬರುತ್ತಿದ್ದಾರೆ.