ಪ್ರಮಾಣವಚನ ಸ್ವೀಕರಿಸಿ ಸಿಎಂ ನಿತೀಶ್ ಕುಮಾರ್ ಕಾಲಿಗೆರಗಿದ ಲಾಲು ಪುತ್ರ ತೇಜಸ್ವಿ - ಈಟಿವಿ ಭಾರತ ಕರ್ನಾಟಕ
ಪಾಟ್ನಾ(ಬಿಹಾರ): ಇಂದಿನಿಂದ ಬಿಹಾರದಲ್ಲಿ ಮಹಾಘಟಬಂಧನ್ ಸಮ್ಮಿಶ್ರ ಸರ್ಕಾರ ಜಾರಿಗೆ ಬಂದಿದೆ. ಹೊಸ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ 8ನೇ ಬಾರಿಗೆ ಪ್ರಮಾಣ ಸ್ವೀಕರಿಸಿದರೆ ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಅಧಿಕಾರದ ಗದ್ದುಗೆ ಏರಿದರು. ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಿದ ನಂತರ 'ಚಾಚಾ' ನಿತೀಶ್ ಕುಮಾರ್ ಅವರ ಕಾಲಿಗೆರಗಿ ಆಶೀರ್ವಾದ ಪಡೆಯಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ತೇಜಸ್ವಿ ಅವರಿಗೆ ಹಸ್ತಲಾಘವ ಮಾಡಿ ಕುರ್ಚಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಈ ಸಂದರ್ಭದ ವಿಡಿಯೋ ಇಲ್ಲಿದೆ.