ವಿಶ್ವಕಪ್ನಿಂದಲೂ ಜಡೇಜಾ ಹೊರಗುಳಿಯುತ್ತಾರಾ: ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ಏನು? - ವಿಶ್ವಕಪ್ನಿಂದಲೂ ಜಡೇಜಾ ಹೊರಗುಳಿಯುತ್ತಾರಾ
ದುಬೈ (ಯುಎಇ): ಮೊಣಕಾಲಿನ ಗಾಯದಿಂದಾಗಿ ಏಷ್ಯಾ ಕಪ್ನಿಂದ ಹೊರಬಿದ್ದಿರುವ ಟೀಂ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಕುರಿತಂತೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ. ಜಡೇಜಾ ಅವರ ಮೊಣಕಾಲಿಗೆ ಗಾಯವಾಗಿದೆ. ಇದರಿಂದ ನಿಸ್ಸಂಶಯವಾಗಿ ಅವರು ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಸದ್ಯ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಟಿ20 ವಿಶ್ವಕಪ್ ಇನ್ನೂ ದೂರ ಇದೆ. ಆದ್ದರಿಂದ ನಾವು ಅವರನ್ನು ಹೊರಗಿಡುವ ಅಥವಾ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈಗಲೇ ಯಾವುದೇ ತೀರ್ಮಾನಕ್ಕೆ ಹೋಗಲು ಬಯಸುವುದಿಲ್ಲ. ಮುಂದೆ ಹೇಗೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.