ಸಣ್ಣ ಕೈಗಾರಿಕಾ ವಲಯಕ್ಕೆ ನಿರಾಶದಾಯಕ ಬಜೆಟ್: ಸುರೇಶ್ ಕುಮಾರ್ ಜೈನ್
ಮೈಸೂರು: ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಈ ಬಾರಿಯ ಕೇಂದ್ರ ಬಜೆಟ್ ನಿರಾಶದಾಯಕವಾಗಿದೆ ಎಂದು ಎಮ್ಎಸ್ಎಮ್ಇ ಪರಿಷತ್ನ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಈ ಕೋವಿಡ್ ನಂತರ ಬಂದ ಮೊದಲ ಕೇಂದ್ರ ಬಜೆಟ್ ಬಗ್ಗೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಆದರೆ ಇಂದು ಮಂಡನೆಯಾದ ಬಜೆಟ್ ನಲ್ಲಿ ಎಮ್ಎಸ್ಎಮ್ಇಗೆ ಯಾವುದೇ ಉತ್ತೇಜನ ನೀಡುವ ಕಾರ್ಯಕ್ರಮಗಳಿಲ್ಲ, ಈ ಬಜೆಟ್ ಎಮ್ಎಸ್ಎಮ್ಇ ಪಾಲಿಗೆ ನೀರಸ ಹಾಗೂ ನಿರಾಶದಾಯಕ. ಆದರೆ ಒಂದು ನೇಷನ್ , ಒಂದು ರೇಷನ್ ಕಾರ್ಡ್ ರೀತಿಯ ಕೆಲವು ಒಳ್ಳೆಯ ಯೊಜನೆ ಇದೆ ಎಂದಿದ್ದಾರೆ.