ಕರ್ನಾಟಕ

karnataka

ETV Bharat / videos

ಮಧ್ಯಾಹ್ನ ಸೂಪರ್‌ಟೆಕ್ ಕಟ್ಟಡ ನೆಲಸಮ: ಸ್ಥಳಾಂತರ ಪ್ರಕ್ರಿಯೆ ಮುಕ್ತಾಯ, ಪೊಲೀಸ್‌ ಸರ್ಪಗಾವಲು - ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ

By

Published : Aug 28, 2022, 10:06 AM IST

ನವದೆಹಲಿ/ನೋಯ್ಡಾ: ನೊಯ್ಡಾದ ಸೂಪರ್​ಟೆಕ್ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಸೆಕ್ಟರ್ 93ಎ ಪ್ರದೇಶದಲ್ಲಿರುವ ಈ ಕಟ್ಟಡಗಳನ್ನು ನಿಯಮಗಳಿಗೆ ವಿರುದ್ಧವಾಗಿ ನಿರ್ಮಿಸಲಾಗಿತ್ತು. 9 ವರ್ಷಗಳ ಸುದೀರ್ಘ ಕಾನೂನು ಸಮರದ ನಂತರ ಗಗನಚುಂಬಿ ಕಟ್ಟಡಗಳನ್ನು ಕೆಡವುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸ್ಥಳದಲ್ಲಿ 560 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮೀಸಲು ಪಡೆಗಳಿಂದ 100 ಸಿಬ್ಬಂದಿ, ಎನ್​​ಡಿಆರ್​​ಎಫ್ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಕಟ್ಟಡದ ಸುತ್ತಲಿನ ಪ್ರದೇಶದಲ್ಲಿ ಜನರನ್ನು ಈಗಾಗಲೇ ಸ್ಥಳಾಂತರಗೊಳಿಸುವ ಕೆಲಸ ಮುಗಿದಿದೆ. ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಕಂಡುಬಂದ ದೃಶ್ಯ, ಪೊಲೀಸ್ ಅಧಿಕಾರಿಯ ಪ್ರತಿಕ್ರಿಯೆ ಇಲ್ಲಿದೆ.

ABOUT THE AUTHOR

...view details