44ನೇ ಚೆಸ್ ಒಲಿಂಪಿಯಾಡ್: ಟೀಸರ್ ರಿಲೀಸ್ ಮಾಡಿದ ಸೂಪರ್ ಸ್ಟಾರ್ ರಜಿನಿಕಾಂತ್ - 44ನೇ ಚೆಸ್ ಒಲಿಂಪಿಯಾಡ್
ಚೆನ್ನೈನಲ್ಲಿ ಆರಂಭಗೊಳ್ಳಲಿರುವ 44ನೇ ಚೆಸ್ ಒಲಿಂಪಿಯಾಡ್ನ ಟೀಸರ್ ಇಂದು ರಿಲೀಸ್ ಆಗಿದೆ. ಸೂಪರ್ಸ್ಟಾರ್ ರಜಿನಿಕಾಂತ್ ಟೀಸರ್ ಬಿಡುಗಡೆ ಮಾಡಿದ್ದಾರೆ. ಜುಲೈ 28ರಿಂದ ಚೆನ್ನೈನ ಮಹಾಬಲಿಪುರಂನಲ್ಲಿ ಕ್ರೀಡೆ ಆರಂಭಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, 44ನೇ ಚೆಸ್ ಒಲಿಂಪಿಯಾಡ್ ಭಾರತದಲ್ಲಿ ಮೊದಲ ಬಾರಿಗೆ ನಮ್ಮ ತಮಿಳುನಾಡಿನಲ್ಲಿ ನಡೆಯಲಿದ್ದು ಅದು ನಮಗೆ ಹೆಮ್ಮೆ ಎಂದಿದ್ದಾರೆ. ಟೀಸರ್ಗೆ ಎಆರ್ ರೆಹಮಾನ್ ಸಂಗೀತವಿದ್ದು, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಹ ಕಾಣಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.