ರಾಷ್ಟ್ರಪತಿಗೆ ದೇವದಾಸಿಯರು ಹೊಲಿದ ಕೌದಿ, ಸೀರೆ ಕೊಟ್ಟ ಸುಧಾಮೂರ್ತಿ..! - ರಾಷ್ಟ್ರಪತಿಗೆ ದೇವದಾಸಿಯರು ಹೊಲಿದ ಕೌದಿ
ಧಾರವಾಡ : ಐಐಐಟಿ ಉದ್ಘಾಟನೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸುಧಾಮೂರ್ತಿ ಅವರು ಕೌದಿ, ಸೀರೆ ಮತ್ತು ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ. ವಿಶೇಷವಾಗಿ ಅವರು ಈ ಹಿಂದೆ ಮೂರುಸಾವಿರ ದೇವದಾಸಿಯರನ್ನು ಆ ವೃತ್ತಿಯಿಂದ ಹೊರತಂದು ಕೌದಿ ಹೊಲಿಯುವ ಸ್ವಯಂ ದುಡಿಮೆ ಮಾಡುವ ಸಂಸ್ಥೆ ನಿರ್ಮಿಸಿ ಅವರಿಗೆಲ್ಲ ಬದುಕು ಕಟ್ಟಿಕೊಟ್ಟಿದ್ದರು. ಅಲ್ಲಿ ಹೊಲಿದಿರುವ ಕೌದಿಯನ್ನು ಇಂದು ಸುಧಾಮೂರ್ತಿ ರಾಷ್ಟ್ರಪತಿಗಳಿಗೆ ವೇದಿಕೆಯಲ್ಲೇ ನೀಡಿದರು. ಅವರು ದೇವದಾಸಿಯರ ಬಗ್ಗೆ ಬರೆದ ಪುಸ್ತಕ ಮೂರು ಸಾವಿರ ಹೊಲಿಗೆಗಳು ಎಂಬ ಪುಸ್ತಕದ ಇಂಗ್ಲಿಷ್ ಮತ್ತು ಹಿಂದಿ ಅನುವಾದಿತ ಕೃತಿಯನ್ನು ನೀಡಿ ಗೌರವಿಸಿದರು. ಹಾಗೇ ಅದರೊಂದಿಗೆ ಇಳಕಲ್ ಸೀರೆಯನ್ನೂ ಕೊಟ್ಟಿದ್ದಾರೆ.
Last Updated : Sep 27, 2022, 12:48 PM IST
TAGGED:
President and cm byte