ಅಮೆಜಾನ್ ನದಿಯ ಕಂಡು ಬರುವ ಕ್ಯಾಟ್ಫೀಶ್ ಬಿಹಾರದಲ್ಲಿ ಬಲೆಗೆ: ಮೀನು ಕಂಡು ಅಚ್ಚರಿಗೊಂಡ ಗ್ರಾಮಸ್ಥರು - suckermouth catfish native
ಚಂಪಾರಣ್ (ಬಿಹಾರ): ದಕ್ಷಿಣ ಅಮೆರಿಕದ ಅಮೆಜಾನ್ ನದಿಯ ಮೂಲದ ಬೆಕ್ಕುಮೀನು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾ ಬ್ಲಾಕ್‌ನಲ್ಲಿರುವ ಹರಹಾ ಕಾಲುವೆಯಲ್ಲಿ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಬಂಚಹರಿ ಗ್ರಾಮದ ಹರಹ ನಾಲೆಯಲ್ಲಿ ಸ್ಥಳೀಯ ಮೀನುಗಾರರು ಬೀಸಿದ ಬಲೆಯಲ್ಲಿ ಸಕ್ಕರ್ಮೌತ್ ಬೆಕ್ಕುಮೀನು ಸಿಕ್ಕಿಬಿದ್ದಿದೆ. ಹೊಸ ರೀತಿ ಮೀನು ಕಂಡು ಗ್ರಾಮಸ್ಥರು ದೌಡಾಯಿಸಿದ್ದರು. ನಂತರ ಮೀನನ್ನು ವಾಲ್ಮೀಕಿ ಹುಲಿ ಸಂರಕ್ಷಿತ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ನದಿಯಲ್ಲಿರುವ ಇತರ ಮೀನುಗಳನ್ನು ಈ ಸಕ್ಕರ್ಮೌತ್ ಬೆಕ್ಕುಮೀನು ತಿಂದು ಬದುಕುವುದರಿಂದ ನದಿ ಪರಿಸಕ್ಕೆ ಇದು ಹಾನಿಕಾರಕವಾದದ್ದು ಎಂದು ಹೇಳಲಾಗುತ್ತಿದೆ.