ಕರ್ನಾಟಕ

karnataka

ETV Bharat / videos

ಪ್ರೀತಿಯ ಸಾಕು ನಾಯಿ ಆ್ಯನಿ ಜೊತೆ '777 ಚಾರ್ಲಿ' ಸಿನಿಮಾ ವೀಕ್ಷಿಸಿದ ಡ್ಯಾನ್ಸ್ ಮಾಸ್ಟರ್ ಸುಭಾಷ್‌ ಚಂದ್ರ - Dance Master Subhash Chandra

By

Published : Jun 22, 2022, 10:16 AM IST

ಬಳ್ಳಾರಿ: ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾವನ್ನು ಬಳ್ಳಾರಿ ನಗರದ ಶಿವ ಚಿತ್ರಮಂದಿರದಲ್ಲಿ ಡ್ಯಾನ್ಸ್ ಮಾಸ್ಟರ್ ಸುಭಾಷ್‌ ಚಂದ್ರ ತಮ್ಮ ಸಾಕು ನಾಯಿ ಆ್ಯನಿಯ ಜೊತೆ ವೀಕ್ಷಿಸಿದರು.'777 ಚಾರ್ಲಿ' ಸಿನಿಮಾ ಸುಭಾಷ್‌ ಚಂದ್ರ ಅವರ ಜೀವನಗಾಥೆಗೆ ತುಂಬಾ ಹತ್ತಿರವಾಗಿದೆ. ಹೀಗಾಗಿ ಆ್ಯನಿ ತನ್ನ ಒಡೆಯನಿಗೆ ಧನ್ಯವಾದ ಹೇಳುವ ಭಂಗಿಯಲ್ಲಿ ಮುತ್ತಿಕ್ಕಿದೆ. ಪ್ರಾಣಿಗಳಿಗೂ ನಮ್ಮಂತೆಯೇ ಭಾವನೆಗಳಿವೆ. ಅವುಗಳಿಗೂ ಬದುಕಲು ಅವಕಾಶ ನೀಡಬೇಕು ಎನ್ನುತ್ತಾರೆ ಸುಭಾಷ್‌ ಚಂದ್ರ. ಚಿತ್ರ ಮಂದಿರದಲ್ಲಿ ಸಾಕು ಪ್ರಾಣಿಗಳ ಪ್ರವೇಶಕ್ಕೆ ನಿಷೇಧ ಇರುವುದರಿಂದ, ಸುಭಾಷ್ ಚಂದ್ರ ಅವರು ತಮ್ಮ ಪ್ರೀತಿಯ ನಾಯಿ ಜೊತೆಗೆ ಸಿನಿಮಾ ನೋಡಲು ಅವಕಾಶ ನೀಡಬೇಕೆಂದು ನಟರಾಜ್ ಕಾಂಪ್ಲೆಕ್ಸ್ ಮಾಲೀಕರಾದ ಲಕ್ಷ್ಮಿಕಾಂತ್ ರೆಡ್ಡಿ ಅವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಮಾಲೀಕರು ಚಿತ್ರ ವೀಕ್ಷಿಸಲು ಅವಕಾಶ ನೀಡಿದರು. ಸಂಪೂರ್ಣ ಚಿತ್ರವನ್ನು ಸುಭಾಷ್‌ ಚಂದ್ರ ಅವರೊಂದಿಗೆ ನೋಡಿ ಆ್ಯನಿ ಸಂಭ್ರಮಿಸಿತು.

ABOUT THE AUTHOR

...view details