ಚಿತ್ರದುರ್ಗದಲ್ಲಿ ಧಾರಾಕಾರ ಮಳೆ.. ಶಾಲೆಗೆ ನುಗ್ಗಿದ ನೀರಿನಿಂದ ಪರದಾಡಿದ ವಿದ್ಯಾರ್ಥಿಗಳು - ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆ
ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯಬ್ಬರಕ್ಕೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ಅವಾಂತರವೇ ಸೃಷ್ಠಿಯಾಗ್ತಿದೆ. ವರುಣಾರ್ಭಟಕ್ಕೆ ತರಗತಿ ಶಾಲೆಗೆ ನೀರು ನುಗ್ಗಿರುವ ಘಟನೆ ನಡೆದಿದೆ. ಸುರಿದ ಬಾರಿ ಮಳೆಗೆ ಪಿಳ್ಳೇಕೆರೆನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೀರು ಭರ್ತಿಯಾಗಿದೆ. ಹೀಗಾಗಿ, ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಜಲ ದಿಗ್ಬಂಧನವಾಗಿದೆ. ಶಾಲೆ ಪ್ರವೇಶಕ್ಕೂ ಜಾಗವಿಲ್ಲದಷ್ಟು ನೀರು ಭರ್ತಿಯಾಗಿದೆ. ಚರಂಡಿ ಇಲ್ಲದ ಕಾರಣ ಮಳೆ ನೀರು ಶಾಲೆಯೊಳಗೆ ನುಗ್ಗಿದೆ. ಪರಿಣಾಮ ನೀರನ್ನು ಶಾಲೆಯಿಂದ ಹೊರಹಾಕಲು ಶಾಲಾ ಸಿಬ್ಬಂದಿ ಪರದಾಡಿದ್ದಾರೆ. ಇನ್ನು ಭಾರೀ ಮಳೆಗೆ ಗ್ರಾಮದ ರಸ್ತೆಗಳು ಕೆರೆಯಂತಾಗಿವೆ. ವಿದ್ಯಾರ್ಥಿಗಳು ಪರದಾಡುವಂತಾಗಿದೆ.