ಕರ್ನಾಟಕ

karnataka

ETV Bharat / videos

ವಿಡಿಯೋ: ಶ್ರೀಲಂಕಾದ ಪ್ರಧಾನಿ ಕುರ್ಚಿ ಕಾವಲಿಗೆ ನಿಂತ ಸೇನಾಪಡೆ - Sri Lankan military personnel guard the Prime Ministers chair

By

Published : Jul 14, 2022, 12:14 PM IST

ಶ್ರೀಲಂಕಾ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಮಾಲ್ಡೀವ್ಸ್‌ಗೆ ಹೋಗಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಇದೀಗ ಸಿಂಗಾಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಕೊಲಂಬೊದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದೀಗ ಸರ್ಕಾರಿ ಕಟ್ಟಡಗಳನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ, ಪ್ರತಿಭಟನಾಕಾರರು ಪ್ರಧಾನಿ ಕಚೇರಿ ಪ್ರವೇಶಿಸಿದಂತೆ ಮತ್ತು ಪ್ರಧಾನಿ ಕುರ್ಚಿಯನ್ನು ನಾಶಪಡಿಸದಂತೆ ಮಿಲಿಟರಿ ಸಿಬ್ಬಂದಿ ಕಾವಲಿಗೆ ನಿಂತು ಕಾಪಾಡುತ್ತಿರುವ ದೃಶ್ಯ ಕಂಡುಬಂತು.

ABOUT THE AUTHOR

...view details