ದುರ್ಗಾಷ್ಟಮಿಯಂದು ಕನ್ನಿಕಾಪರಮೇಶ್ವರಿ ದೇವಿಗೆ ವಿಶೇಷ ಬಿಸ್ಕೆಟ್ ಅಲಂಕಾರ.. - ದುರ್ಗಾಷ್ಟಮಿ
ನವರಾತ್ರಿ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡುವ ಮೂಲಕ ಭಕ್ತರು ಭಕ್ತಿ ಸಮರ್ಪಣೆ ಮಾಡುತ್ತಿದ್ದಾರೆ. ಅದೇ ರೀತಿ, ಕನ್ನಿಕಾ ಪರಮೇಶ್ವರಿ ದೇವಿಗೆ ಬಿಸ್ಕಟ್ ಅಲಂಕಾರ ಮಾಡಿ ಆರಾಧನೆ ಮಾಡಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬ್ಯಾಲ್ಯಾ ಗ್ರಾಮದಲ್ಲಿ ಕನ್ನಿಕಾ ಪರಮೇಶ್ವರಿಗೆ ಭಕ್ತರು ವಿವಿಧ ಬಿಸ್ಕೆಟ್ಗಳಾದ ಕ್ರೀಮ್ ಬಿಸ್ಕೆಟ್, ಸಾದಾ ಬಿಸ್ಕೆಟ್, ಚಾಕಲೇಟ್ ಬಿಸ್ಕೆಟ್ ಸೇರಿದಂತೆ ವಿವಿಧ ಫ್ಲೇವರ್ ಗಳ ಬಿಸ್ಕೆಟ್ ಬಳಸಿ ದುರ್ಗಾಷ್ಟಮಿ ದಿನದಂದು ಅಲಂಕಾರ ಮಾಡಿದ್ದರು.