ಡಿಕೆಶಿ ಶೀಘ್ರ ಬಿಡುಗಡೆಯಾಗಲೆಂದು ಚಂಡಿಕಾಹೋಮ.. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹರಕೆ! - ಕಾಂಗ್ರೆಸ್ನ ಪದಾಧಿಕಾರಿಗಳು
ಉಡುಪಿ: ಅಕ್ರಮ ಹಣಕಾಸಿನ ವ್ಯವಹಾರ ಆರೋಪದ ಮೇಲೆ ಐಟಿ ಇಲಾಖೆಯಿಂದ ಬಂಧಿತರಾದ ಡಿ ಕೆ ಶಿವಕುಮಾರ್ ಶೀಘ್ರ ಬಿಡುಗಡೆ ಆಗಲೆಂದು ಕೊಲ್ಲೂರು ಶ್ರೀಮೂಕಾಂಬಿಕಾ ಸನ್ನಿಧಾನದಲ್ಲಿ ಚಂಡಿಕಾ ಹೋಮ ಮಾಡಲಾಗಿದೆ. ಡಿಕೆಶಿ ಫೋಟೋ ಮುಂದಿಟ್ಟು, ರಾಜ್ಯ ಕಾಂಗ್ರೆಸ್ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಚಂಡಿಕಾ ಹೋಮ ಮತ್ತು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಮಾಡಿದರು. ಡಿಕೆಶಿ ಅವರಿಗೆ ಎದುರಾಗಿರುವ ಎಲ್ಲಾ ಸಂಕಷ್ಟಗಳು ಪರಿಹಾರವಾಗಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು. ವಿಶೇಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಟ್ಟಿಕೊಂಡಿರುವ ಹರಕೆಯಂತೆಯಂತೆ ಪೂಜಾ ಕೈಂಕರ್ಯಗಳು ನಡೆದಿವೆಯಂತೆ. ಜತೆಗೆ ಡಿಕೆಶಿ ದೊಡ್ಡಪ್ಪ, ಚಿಕ್ಕಪ್ಪನ ಕುಟುಂಬಸ್ಥರೂ ಸಹ ಇದರಲ್ಲಿ ಭಾಗಿಯಾಗಿದ್ದರು.