ಕರ್ನಾಟಕ

karnataka

ETV Bharat / videos

ವಿಡಿಯೋ: ಗೋವಿನ ಕಳೇಬರದ ಮೆರವಣಿಗೆ ನಡೆಸಿ ಶಾಸ್ತ್ರೋಕ್ತ ಅಂತ್ಯಸಂಸ್ಕಾರ - Sri Mahamankali Amma Temple

By

Published : May 19, 2022, 7:51 AM IST

ಬಳ್ಳಾರಿ: ಗೋವಿನ ಮೃತದೇಹದ ಅಂತ್ಯಕ್ರಿಯೆಯನ್ನು ಮನುಷ್ಯರಿಗೆ ಮಾಡುವ ರೀತಿಯಲ್ಲೇ ಧಾರ್ಮಿಕ ವಿಧಿವಿಧಾನ ನಡೆಸಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಗಿದೆ. ಸಿರುಗುಪ್ಪ ತಾಲೂಕಿನ ಬಲಕುಂದಿ ಭಾಗದ ಇತಿಹಾಸ ಪ್ರಸಿದ್ಧ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಪರಿವಾರ ಸದಸ್ಯನಂತಿದ್ದ, ಈ ಆಕಳು ಅನಾರೋಗ್ಯದ ನಿಮಿತ್ತ ಸಾವನ್ನಪ್ಪಿದೆ. ಗೋವಿನ ಮೃತದೇಹವನ್ನು ಅಲಂಕರಿಸಿದ ಎತ್ತಿನ‌ಬಂಡಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಹಾಡು ಹಾಡುತ್ತಾ, ವಾದ್ಯಗಳೊಡನೆ ಪುಷ್ಪನಮನ, ಪೂಜೆ ನಡೆಯಿತು. ಅಗಲಿದ ಪ್ರೀತಿಯ ಆಕಳು ನೆನೆದು ಗ್ರಾಮಸ್ಥರು ಕಣ್ಣೀರಿಟ್ಟರು.

ABOUT THE AUTHOR

...view details