ರೌಡಿಗಳ ಪರೇಡ್ ನಡೆಸಿ, ಎಚ್ಚರಿಕೆ ನೀಡಿದ ವಿಜಯಪುರ ಎಸ್ಪಿ - ವಿಜಯಪುರ ಎಸ್ಪಿ ಆನಂದ ಕುಮಾರ್
ವಿಜಯಪುರ: ಹೆಚ್ಚುತ್ತಿರುವ ಅಪರಾಧ ಕೃತ್ಯ ತಡೆಯಲು ಎಸ್ಪಿ ಆನಂದ ಕುಮಾರ್ ಇಂದು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಸಿದರು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ನಿಮ್ಮ ಹೆಸರು ಕೇಳಿ ಬಂದರೆ ಗ್ರಹಚಾರ ಬಿಡಿಸುವೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ಸಂಗ್ರಹ ಸಾಗಾಟ ಮಾರಾಟ ಪ್ರಕರಣದಲ್ಲಿ ಭಾಗಿಯಾದ ರೌಡಿ ಶೀಟರ್ಗಳ ಬೆವರಿಳಿಸಿದರು. ನಗರದ ಗಾಂಧಿಚೌಕ್, ಜಲನಗರ, ಗೋಲಗುಂಬಜ್, ಎಪಿಎಂಸಿ, ಆದರ್ಶ ನಗರ, ವಿಜಯಪುರ ಗ್ರಾಮೀಣ ಠಾಣೆ, ತಿಕೋಟಾ ಹಾಗೂ ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಗಿದೆ.