ಕರ್ನಾಟಕ

karnataka

ETV Bharat / videos

ಒಂದೇ ಕಾಲಲ್ಲಿ ಶಾಲೆಗೆ ಬರುವ ಪುಟಾಣಿ.. ವಿಡಿಯೋ ನೋಡಿ ನೆರವಿಗೆ ಮುಂದಾದ ಸೋನು ಸೂದ್! - ಒಂದೇ ಕಾಲಲ್ಲಿ ಶಾಲೆಗೆ ಬರುವ ಪುಟಾಣಿ

By

Published : May 25, 2022, 9:41 PM IST

ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡಿರುವ ವಿದ್ಯಾರ್ಥಿಯೊಬ್ಬಳು ಒಂದೇ ಕಾಲಲ್ಲಿ ಶಾಲೆಗೆ ಬರುವ ವಿಡಿಯೋ ತುಣಕವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪ್ರತಿದಿನ ಶಾಲೆ ಕಲಿಯಲು 1 ಕಿಲೋ ಮೀಟರ್​ ಬರುವ ವಿದ್ಯಾರ್ಥಿನಿ ಸೀಮಾಗೆ ಇದೀಗ ನಟ ಸೋನು ಸೂದ್ ಸಹಾಯ ಮಾಡಲು ಮುಂದಾಗಿದ್ದಾರೆ. ಟ್ವೀಟ್ ಮಾಡಿರುವ ಸೋನು ಸೂದ್ ಸೀಮಾ ಶೀಘ್ರದಲ್ಲೇ ತನ್ನ ಎರಡೂ ಕಾಲುಗಳನ್ನು ಹಾಕಿಕೊಂಡು ಶಾಲೆಗೆ ಹೋಗುತ್ತಾಳೆ ಎಂದು ಭರವಸೆ ನೀಡಿದ್ದಾರೆ. 10 ವರ್ಷದ ವಿಕಲಚೇತನ ವಿದ್ಯಾರ್ಥಿನಿ ಸೀಮಾ ಪ್ರತಿದಿನ ಶಾಲೆಗೆ ಹೋಗಲು ಕಿಲೋಮೀಟರ್ ದೂರ ಕ್ರಮಿಸುತ್ತಾರೆ. ಒಂದೇ ಕಾಲಿನಲ್ಲಿ ನಡೆದುಕೊಂಡು ಶಾಲೆಗೆ ಹೋಗುವ ಮೂಲಕ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಸೀಮಾ ಗಂಭೀರವಾಗಿ ಗಾಯಗೊಂಡಿದ್ದರು. ಬಾಲಕಿಯ ಜೀವ ಉಳಿಸಲು ವೈದ್ಯರು ಒಂದು ಕಾಲು ಕತ್ತರಿಸಬೇಕಾಯಿತು. ಚೇತರಿಸಿಕೊಂಡ ನಂತರ ಸೀಮಾ ಎಲ್ಲ ಕೆಲಸ ಮಾಡಲು ಪ್ರಾರಂಭಿಸಿ, ಇದೀಗ ಶಾಲೆಗೂ ಹೋಗುತ್ತಿದ್ದಾಳೆ.

ABOUT THE AUTHOR

...view details