ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೂ ಮುನ್ನದ ಮತ್ತೊಂದು ಸಿಸಿಟಿವಿ ದೃಶ್ಯ ಬಹಿರಂಗ - ಈಟಿವಿ ಭಾರತ ಕನ್ನಡ
ಪಣಜಿ(ಗೋವಾ): ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಿಸಿಟಿವಿ ದೃಶ್ಯಾವಳಿ ಹೊರಬಿದ್ದಿದೆ. ಇದು ಗೋವಾದಲ್ಲಿ ಅವರು ಕೊನೆಯ ಬಾರಿಗೆ ಪಾರ್ಟಿ ಮಾಡಿದ ದೃಶ್ಯಾವಳಿ ಎಂದು ಹೇಳಲಾಗುತ್ತಿದೆ. ಈ ವಿಡಿಯೋದಲ್ಲಿ ಸೋನಾಲಿ ಫೋಗಟ್ ಅವರಿಗೆ ಬಲವಂತದಿಂದ ಬಾಟಲಿಯಿಂದ ಏನೋ ಕುಡಿಸುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋದಲ್ಲಿರುವುದು ಆರೋಪಿಗಳಾದ ಸುಧೀರ್ ಸಂಗ್ವಾನ್ ಮತ್ತು ಸುಖ್ವಿಂದರ್ ಆಗಿದ್ದು, ಸೋನಾಲಿ ಫೋಗಟ್ ಅವರಿಗೆ ಡ್ರಗ್ಸ್ ಕುಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಸೋನಾಲಿ ಫೋಗಟ್ ಸಾವಿನ ಪ್ರಕರಣವನ್ನು ಗೋವಾ ಪೊಲೀಸರು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.