ಶಾಲೆ ಕೊಠಡಿಯೊಳಗೆ ನಾಗರಹಾವು.. ಹೊಟ್ಟೆಯೊಳಗೆ ಮೂರು ಬೆಕ್ಕಿನ ಮರಿಗಳು - ಸ್ನೇಕ್ ಸೇವಿಯರ್ಸ್ ಸೊಸೈಟಿ
ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಉಂಗತ್ತೂರು ಮಂಡಲದ ನಾರಾಯಣಪುರಂ ಸರ್ಕಾರಿ ಪ್ರೌಢಶಾಲೆಯ ಪುಸ್ತಕ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಕೊಠಡಿಯಲ್ಲಿ ಗುರುವಾರ ಆರು ಅಡಿ ಉದ್ದದ ನಾಗರ ಹಾವು ಸಿಬ್ಬಂದಿಗೆ ಕಾಣಿಸಿಕೊಂಡಿದೆ. ಶಾಲೆಯ ಮುಖ್ಯಶಿಕ್ಷಕ ಸ್ನೇಕ್ ಸೇವಿಯರ್ಸ್ ಸೊಸೈಟಿಗೆ ಮಾಹಿತಿ ನೀಡಿದ್ದು, ಅವರು ಜಾಣತನದಿಂದ ಸೆರೆ ಹಿಡಿದಿದ್ದಾರೆ. ಆ ವೇಳೆ ಹಾವಿನ ಬಾಯಿಯಿಂದ ಮೂರು ಬೆಕ್ಕಿನ ಮರಿಗಳು ಹೊರಬಂದಿವೆ. ನಂತರ ಹಾವನ್ನು ಸುರಕ್ಷಿತವಾಗಿ ಜಿ. ಕೊತ್ತಪಲ್ಲಿ ಅರಣ್ಯಕ್ಕೆ ಬಿಡಲಾಯಿತು.