ವಿಶ್ವ ವಿಖ್ಯಾತ ದಸರಾ: ಮೆರುಗು ಕಟ್ಟಿದ ರೈತ ಕ್ರೀಡಾಕೂಟ ಉತ್ಸವ - ಈಟಿವಿ ಭಾರತ ಕನ್ನಡ
ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ 6ನೇ ದಿನಕ್ಕೆ ಕಾಲಿಟ್ಟಿದ್ದು, ರೈತ ಕ್ರೀಡಾಕೂಟಕ್ಕೆ ನಗರದ ಓವೆಲ್ ಮೈದಾನದಲ್ಲಿ ಬಲೂನ್ ಹಾರಿಸುವ ಮೂಲಕ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು. ಬಳಿಕ ರೈತರು 50 ಕೆಜಿ ಗೊಬ್ಬರ ಮೂಟೆ ಹೊತ್ತುಕೊಂಡು ಓಡುವ ಸ್ಪರ್ಧೆಯಲ್ಲಿ ಭಾಗವಹಿಸಿದರು. ಜೆ.ಕೆ ಮೈದಾನದಲ್ಲಿ ರೈತರ ಕೃಷಿ ಪ್ರದರ್ಶನ ಕಾರ್ಯಕ್ರಮದಲ್ಲಿ ಗೋಣಿಚೀಲ ಹಾಕಿಕೊಂಡು ನೆಗೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.