ಬೈಕ್ ಸವಾರನ ರಕ್ಷಿಸಲು ಹೋಗಿ, ಪಲ್ಟಿಯಾದ ಬಸ್: ಸ್ಥಳದಲ್ಲೇ 6 ಮಂದಿ ಸಾವು - ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್
ಲಲಿತ್ಪುರ(ಬಿಹಾರ): ಬೈಕ್ ಸವಾರನನ್ನು ರಕ್ಷಣೆ ಮಾಡಲು ಹೋಗಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದ್ದು, ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಜೊತೆಗೆ 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಬಿಹಾರದ ಲಲಿತ್ಪುರ ಜಿಲ್ಲೆಯ ಮಸೌರಾ ಕಲಾನ್ ಪ್ರದೇಶದಲ್ಲಿ ಘಟನೆ ನಡೆದಿದೆ. ಲಲಿತ್ಪುರದಿಂದ ಧೋರಿ ಸಾಗರ್ಗೆ ಬಸ್ ತೆರಳುತ್ತಿದ್ದ ವೇಳೆ ಬೈಕ್ ಸವಾರನೋರ್ವ ಓವರ್ಟೆಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ರಕ್ಷಣೆ ಮಾಡಲು ಚಾಲಕ ಬ್ರೇಕ್ ಹಾಕಿದ್ದು, ಬಸ್ ಪಲ್ಟಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯ ನಡೆಸಿ, ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.