ನಾಯಕತ್ವ ಬದಲಾವಣೆ ಮಾತು: ಸಿದ್ದರಾಮಯ್ಯರದ್ದು ತಿರುಕನ ಕನಸು ಎಂದ ಶೋಭಾ ಕರಂದ್ಲಾಜೆ - Rajarajeshwari nagar by-election
ಬೆಂಗಳೂರು: ಚುನಾವಣೆ ನಂತರ ನಾಯಕತ್ವದ ಬದಲಾವಣೆಯ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾಣುತ್ತಿರುವುದು ತಿರುಕನ ಕನಸು ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಉಪಚುನಾವಣೆ ಮುಗಿಯುವವರೆಗೂ ಡಿ ಕೆ ಸಹೋದರರು ಕ್ಷೇತ್ರದಲ್ಲಿ ಇರಬಾರದು. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಕ್ರಮವಾಗಿ ಗುರುತಿನ ಚೀಟಿ ತೆಗೆದುಕೊಂಡಿದೆ ಎಂದು ಆರೋಪಿಸಿದರು. ಅಲ್ಲದೆ, ಈ ಕುರಿತಂತೆ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿರುವುದಾಗಿ ಹೇಳಿದ್ರು.