ಮಾಜಿ ಶಾಸಕ ಕೋನರೆಡ್ಡಿ ಮನೆಯಲ್ಲಿ ಉಪಹಾರ ಸೇವಿಸಿದ ಸಿದ್ದು - ಧಾರವಾಡ ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ
ಧಾರವಾಡ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ್ ಪರ ಪ್ರಚಾರಕ್ಕೆ ಆಗಮಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಲಗೇರಿ ಬಡಾವಣೆಯಲ್ಲಿನ ಮಾಜಿ ಶಾಸಕ ಕೋನರೆಡ್ಡಿ ನಿವಾಸದಲ್ಲಿ ಉಪಹಾರ ಸೇವಿಸಿದರು. ಉಪಹಾರದಲ್ಲಿ ಇಡ್ಲಿ, ವಡಾ, ಚಟ್ನಿ ಸಾಂಬಾರ್, ಪುರಿ, ಪಡ್ಡು ಸವಿದರು. ಈ ವೇಳೆ ಕೋನರೆಡ್ಡಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇದ್ದರು. ಉಪಹಾರದ ಬಳಿಕ ಸಿದ್ದರಾಮಯ್ಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ.
Last Updated : Jun 8, 2022, 11:57 AM IST