ದಿಂಗಾಲೇಶ್ವರ ಸ್ವಾಮೀಜಿ ಪರ್ಸೆಂಟೇಜ್ ಹೇಳಿಕೆಗೆ ಸಾರಂಗಧರ ಶ್ರೀ ಆಕ್ರೋಶ - ದಿಂಗಾಲೇಶ್ವರ ಶ್ರೀಗಳ 30% ಪರ್ಸಂಟೇಜ್ ಆರೋಪ
ದಿಂಗಾಲೇಶ್ವರ ಶ್ರೀಗಳ 30% ಪರ್ಸಂಟೇಜ್ ಆರೋಪವನ್ನು ಶ್ರೀಶೈಲಂ ಮಠದ ಪೀಠಾಧ್ಯಕ್ಷ ಶ್ರೀ ಸಾರಂಗಧರೇಶ್ವರ ದೇಶಿಕೇಂದ್ರ ಸ್ವಾಮೀಜಿ ತಳ್ಳಿ ಹಾಕಿದ್ದಾರೆ. ನಮ್ಮ ಮಠಕ್ಕೂ ಅನುದಾನ ಬಂದಿದೆ. ಯಾರಿಗೂ ನಯಾಪೈಸೆ ಪರ್ಸೆಂಟೇಸ್ ಕೊಟ್ಟಿಲ್ಲ ಅಂತಾ ಸಾರಂಗಧರ ಶ್ರೀ ಹೇಳಿದ್ದಾರೆ. ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಎಲ್ಲಾ ಸರ್ಕಾರಗಳು ಮಠಗಳಿಗೆ ಅನುದಾನ ನೀಡಿವೆ. ಹಿಂದಿನಿಂದಲೂ ಯಾವ ಸರ್ಕಾರ ಕೂಡ ನಮ್ಮ ಹತ್ತಿರ ಪರ್ಸೆಂಟೇಜ್ ಪಡೆದಿಲ್ಲ ಎಂದಿದ್ದಾರೆ.