ಕಲಿಯುಗದ ಶ್ರವಣಕುಮಾರ! ಪೋಷಕರ ಕಾವಡಿಯಲ್ಲಿ ಕೂರಿಸಿಕೊಂಡು ಹರಿದ್ವಾರ ಯಾತ್ರೆ ಮಾಡಿದ ಮಗ
ತ್ರೇತಾಯುಗದಲ್ಲಿ ತಂದೆ-ತಾಯಿಯನ್ನು ಹೊತ್ತು ಶ್ರವಣಕುಮಾರ ತೀರ್ಥಯಾತ್ರೆ ಮಾಡಿಸಿದ್ದನಂತೆ. ಅದೇ ರೀತಿ ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿ ವಿಕಾಸ್ ಗೆಹ್ಲೋಟ್ ಎಂಬಾತ ಕೂಡ ತನ್ನ ಪೋಷಕರನ್ನು ಹೆಗಲ ಮೇಲೆ ಹೊತ್ತು ಹರಿದ್ವಾರ ಯಾತ್ರೆ ಮಾಡಿಸಿದ್ದಾನೆ. ಕಾವಡಿಯಲ್ಲಿ ಇಬ್ಬರನ್ನು ಕೂರಿಸಿಕೊಂಡ ವಿಕಾಸ್ ಹರಿದ್ವಾರದಿಂದ ವಾಪಸ್ ಗಾಜಿಯಾಬಾದ್ಗೆ ಮರಳುತ್ತಿದ್ದು, ಇದನ್ನು ಕಂಡ ಜನರು ವಿಕಾಸ್‌ನನ್ನು ಸನ್ಮಾನಿಸಿದ್ದಾರೆ. ತನ್ನ ಕಷ್ಟ ತಂದೆ- ತಾಯಿಗೆ ಕಾಣಬಾರದೆಂದು ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಿದ್ದಾನೆ. ಬರುವಾಗ 20 ಲೀಟರ್ ಪವಿತ್ರ ಗಂಗಾಜಲವನ್ನೂ ಹೊತ್ತು ತಂದಿದ್ದಾರೆ. ಜನರು ಈತನನ್ನು ಕಲಿಯುಗದ ಶ್ರವಣಕುಮಾರ ಎಂದು ಬಣ್ಣಿಸಿದ್ದಾರೆ.